ಆಕೆಯೊಡೆತನಕ್ಕೆ ಇನ್ನಷ್ಟೂ ಅಮಲು

ವಿರಹಗಳು ಕಣ್ಣುಗಳ 
ರೆಪ್ಪೆಯಂಚಿಗೆ ಕೂತು
ಅಣಕಿಸುತ್ತವೆ; ಕಪ್ಪು ಮಸೂರದ ಹಿಂದೆ
ಮೂಡಿದ್ದೇ ಚಿತ್ರಗಳು, 
ಗದ್ದದಿಂದ ಜಾರುವ ಬೆವರ ಹನಿ
ಮನಸ್ಸನ್ನು ನೇವರಿಸುವ ಬೆರಳು,

ಬಾಯಿ ಒಣಗುತ್ತದೆ
ನಾಲಿಗೆಗೆ ತ್ಯಾಪೆ ಹಚ್ಚುವ ಕೆಲಸ,
ಮಳೆ ಬಂದಿದ್ದರೆ ಮಣ್ಣು ಹಸಿಯಿರಬೇಕು,
ಹಾವ ದೇಹದ ತುಟಿ,
ಸರಿದಾಡುವ ಪರಿಗೆ ಬೆರಗು.
ಕುಹಕವಾಡುವ ಬಾಟಲಿಗಳು ಸದ್ಯ ಖಾಲಿ,
ನಶೆಗೆ ಕುಡಿಯಲೇ ಬೇಕೆಂದಿಲ್ಲ
ಮೈಮೇಲೆ ಜಾರಿ ಬಿದ್ದ
ಬೆವರ ವಾಸನೆಯಿದೆ,
ಆಕೆಯೊಡೆತನಕ್ಕೆ ಇನ್ನಷ್ಟೂ ಅಮಲು.

ಕಣ್ಣು ಮುಚ್ಚುತ್ತಲೇ
ನೀಳ ಕೂದಲು ಮುಖದ ಮೇಲೆ
ಕಚಗುಳಿ ಇಟ್ಟಂತೆ ಭಾಸ; ಕತ್ತಲಿರಬಹುದು
ರಾತ್ರಿಯಿಡೀ ಕಣ್ಣುಗಳು
ವಯಸಿನಡಿಯಾಳು.

ಪರಿಮಿತ ಚಂದಿರ
ಅಪರಿಮಿತ ಕತ್ತಲು
ಪರಿಥಿಗಳ ನಡುವೆ ನಾನು ನರಳುತ್ತೇನೆ,
ಮುಲುಗುತ್ತೇನೆ.

-ಪ್ರವರ ಕೊಟ್ಟೂರು

Comments

  1. ಪರಿಮಿತ ಚಂದಿರ... ಅಪರಿಮಿತ ಕತ್ತಲು... Waw... Waw...sweet lines...

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ